ಶಿವಪುರ : ಕುಲಾಲ ಸಂಘ (ರಿ.) ಶಿವಪುರ ಇದರ 2026–27ನೇ ಸಾಲಿನ 11ನೇ ವರ್ಷದ ವಾರ್ಷಿಕ ಸಮಾವೇಶ, ಸತ್ಯನಾರಾಯಣ ಪೂಜೆ ಹಾಗೂ ವಿದ್ಯಾಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ ಶಂಕರದೇವ ದೇವಸ್ಥಾನದ ಸಭಾಭವನದಲ್ಲಿ ಅಕ್ಟೋಬರ್ 25, 2026ರಂದು ಅತ್ಯಂತ ಸಂಭ್ರಮದಿಂದ ಜರುಗಿತು.
ಕುಲಾಲ ಸಂಘ (ರಿ.) ಶಿವಪುರದ ಅಧ್ಯಕ್ಷ ವಾಸುದೇವ ಕುಲಾಲ್, ವಾಂಟ್ಯಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ನಿವೃತ್ತ ಸೈನಿಕ ರಮೇಶ್ ಕುಲಾಲ್ (ದೂಪದಕಟ್ಟೆ), ಕುಂದಾಪುರದ ಕುಲಾಲ ಸಮಾಜ ಸುಧಾರಕ ಸಂಘದ ಅಧ್ಯಕ್ಷ ರಾಘವೇಂದ್ರ ಕುಲಾಲ್ (ಹೆಮ್ಮಾಡಿ), ಜೆ.ಸಿ.ಐ. ಹೆಬ್ರಿಯ ಅಧ್ಯಕ್ಷ ಸತೀಶ್ ಕುಲಾಲ್, ವಿಶೇಷ ಅತಿಥಿಗಳಾಗಿ ಐತು ಕುಲಾಲ್ ಕನ್ಯಾನ ಮತ್ತು ಮಂಜುನಾಥ ಕುಲಾಲ್ ಜನ್ಸಾಲೆ, ಕಾರ್ಯದರ್ಶಿ ಮಣಿಕಂಠ ಕುಲಾಲ್, ಗೌರವಾಧ್ಯಕ್ಷ ಉದಯ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷ ಸುನಂದ ಕುಲಾಲ್ ಉಪಸ್ಥಿತರಿದ್ದರು.
ರಮಿತಾ ಪ್ರಾರ್ಥಿಸಿದರು. ಸಂಘದ ಪೂರ್ವಾಧ್ಯಕ್ಷ ಜಗನ್ನಾಥ ಕುಲಾಲ್ ಸ್ವಾಗತ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರೂಪಣೆಯನ್ನು ಅಧ್ಯಾಪಕ ಮಂಜುನಾಥ ಕುಲಾಲ್ ನೆರವೇರಿಸಿಕೊಟ್ಟರು. ಕಾರ್ಯದರ್ಶಿ ಮಣಿಕಂಠ ಕುಲಾಲ್ ವರದಿ ಮಂಡಿಸಿದರು. ಸಂತೋಷ ಕುಲಾಲ ಲೆಕ್ಕಪತ್ರ ಮಂಡನೆ ಮಾಡಿದರು.
ಸಮಾಜ ಸೇವೆಯಲ್ಲಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಹಾಗೂ ಪ್ರತಿಭೆಗಳನ್ನು ಗೌರವಿಸಲಾಯಿತು.
ಸನ್ಮಾನಿತರು: ಹಿರಿಯ ನಾಗರಿಕರು ಹಾಗೂ ಕೃಷಿಕ ಕೊಲ್ಲ ಹಾಂಡ ಮಾರ್ಮಕ್ಕಿ, ಹಿರಿಯ ನಾಗರಿಕ ಭೋಜು ಕುಲಾಲ್ ಸೂರಿಮಣ್ಣು, ಹಾಗೂ ತುಳು ಭಾಷಣ ಸ್ಪರ್ಧೆಯ ರಾಜ್ಯಮಟ್ಟದ ವಿಜೇತೆ ವರ್ಷಿಣಿ ಕುಲಾಲ್ ಕೆಳಮುಳುಗುಡ್ಡೆ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ದೀಕ್ಷಾ ಕುಲಾಲ ಮತ್ತು ಪೂರ್ಣೇಶ ಕುಲಾಲ್ ವಾಚಿಸಿದರು.
ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ವಿದ್ಯಾಪ್ರೋತ್ಸಾಹ ಧನ ವಿತರಣಾ ಯಾದಿಯನ್ನು ರಮೇಶ ಕುಲಾಲ್ ವಾಂಟ್ಯಾಳ ವಾಚಿಸಿದರು.ಸೀಮಾ ರಮೇಶ್ ಬಹುಮಾನ ಯಾದಿ ವಾಚಿಸಿ, ವಂದಿಸಿದರು.
ರಾಘವೇಂದ್ರ ಕುಲಾಲ್, “ಕುಲಾಲ ಸಮುದಾಯವು ಸ್ವಾಭಿಮಾನ ಮತ್ತು ಶಿಕ್ಷಣಕ್ಕಾಗಿ ಒಂದುಗೂಡುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಶಿವಪುರ ಕುಲಾಲ ಸಂಘವು ಇಡೀ ಸಮಾಜಕ್ಕೆ ಮಾದರಿಯಾಗಿರುವ ಸಂಘಗಳಲ್ಲಿ ಒಂದಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಧ್ಯಾಹ್ನದ ಬಳಿಕ ಶರತ್ ಕುಲಾಲ್ ಮತ್ತು ಸೀಮಾ ಕುಲಾಲ್ ಅವರ ನಿರೂಪಣೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಊರ ಹಾಗೂ ಪರವೂರಿನ ಹತ್ತಾರು ಬಂಧುಗಳು, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಈ ಮಹಾಸಮಾವೇಶದಲ್ಲಿ ಪಾಲ್ಗೊಂಡು ತನು-ಮನ-ಧನಗಳಿಂದ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Udaya Prabha > State News > ಶಿವಪುರ ಕುಲಾಲ ಸಂಘದ 11ನೇ ವರ್ಷದ ವಾರ್ಷಿಕ ಸಮಾವೇಶ, ಸತ್ಯನಾರಾಯಣ ಪೂಜೆ ಮತ್ತು ವಿದ್ಯಾಪ್ರೋತ್ಸಾಹ ಧನ ವಿತರಣೆ
ಶಿವಪುರ ಕುಲಾಲ ಸಂಘದ 11ನೇ ವರ್ಷದ ವಾರ್ಷಿಕ ಸಮಾವೇಶ, ಸತ್ಯನಾರಾಯಣ ಪೂಜೆ ಮತ್ತು ವಿದ್ಯಾಪ್ರೋತ್ಸಾಹ ಧನ ವಿತರಣೆ
Team Udayaprabha27/10/2026
posted on

the authorTeam Udayaprabha
All posts byTeam Udayaprabha
Leave a reply

,


















