| Latest Version 9.0.7 |

State News

ಬೆಳಗಾವಿ ನಾದ ಸುಧಾ ಸಂಗೀತ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

ಬೆಳಗಾವಿ : ನಮ್ಮ ಕನ್ನಡ ನಾಡು, ಕನ್ನಡ ನುಡಿ,ನಮ್ಮ ಸಂಸ್ಕೃತಿ ಹಾಗೂ ಕಲೆಯನ್ನು ಉಳಿಸಿ ಬೆಳೆಸಬೇಕಾದರೆ ನಮ್ಮ ಕರ್ನಾಟಕದ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವವನ್ನು ಎಲ್ಲರೂ ಆಚರಿಸಿ ಭಾಗಿಯಾಗಬೇಕು, ಎಂದು ಉನ್ನತ ಪದವೀಧರರು ಕ್ರಿಯಾಶೀಲ ಶೈಕ್ಷಣಿಕ ತಜ್ಞರು ಹಾಗೂ ಸಂಗೀತ ನೃತ್ಯ ಕಲಾ ವಿಷಯಗಳಲ್ಲಿ ನೈಪುಣ್ಯತೆಯನ್ನು ಪಡೆದ ಶಿಲ್ಪಾ ಕುಲಕರ್ಣಿ ಹೇಳಿದರು.

ಬೆಳಗಾವಿಯ ನಾದ ಸುಧಾ ಸಂಗೀತ ಶಾಲೆಯಲ್ಲಿ ಆಯೋಜಿಸಲಾಗಿದ್ದ 71ನೇ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.

ಈ ನಿಟ್ಟಿನಲ್ಲಿ ನಾದಸುಧಾ ಸಂಗೀತ ಶಾಲೆಯ ಮುಖ್ಯಸ್ಥ ಡಾ. ಸತ್ಯನಾರಾಯಣ ಅವರು 17 ವರ್ಷದಿಂದ ಹಗಲಿರಳು ಶ್ರಮಿಸುತ್ತಿದ್ದಾರೆ ಎಂದು ಭಾವಪೂರ್ಣವಾಗಿ ನುಡಿದರು.

ಸಂಗೀತ ಹಾಡುವುದಷ್ಟೇ ಅಲ್ಲ. ನೀವು ಹಾಡುವ ಹಾಡು ಪ್ರೇಕ್ಷಕರ ಹೃದಯಕ್ಕೆ ಮುಟ್ಟಬೇಕು ಆಗಲೇ ನಿಮ್ಮ ಸಂಗೀತ ಸಾರ್ಥಕವಾದಂತೆ ಎಂದು ಕಿವಿ ಮಾತನ್ನು ನುಡಿದರು.

ಸಂಗೀತ ಶಾಲೆಯ ಸಂಸ್ಥಾಪಕ ಡಾ. ಸತ್ಯನಾರಾಯಣ್ ಅವರು ನಮ್ಮ ನಾಡಿನಲ್ಲಿ ವಿವಿಧ ಕಲೆಗಳಿಗೆ ಯಾವುದೇ ಕೊರತೆ ಇಲ್ಲ ಆದರೆ ಅದನ್ನು ನಾವು ಬೆಳೆಸಿಕೊಳ್ಳಲು ಶ್ರಮವಹಿಸಬೇಕೆಂದು ಹೇಳಿದರು.

ಮಕ್ಕಳಿಗೆ ಉತ್ಸಾಹ ತುಂಬಲು ಪ್ರೋತ್ಸಾಹದಾಯಕವಾದ ಕನ್ನಡ ಗೀತೆಗಳ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು, ಗೆದ್ದವರಿಗೆ ಅತಿಥಿಗಳು ಬಹುಮಾನ ವಿತರಿಸಿದರು.
ಸ್ನೇಹಲ್ ಬೆಟಗೇರಿ ಸ್ವಾಗತಿಸಿ ವಂದಿಸಿದರು.

Team Udayaprabha
";