| Latest Version 9.0.7 |

State News

ಬೆಳ್ವೆ:ಎಸ್ ಜಯರಾಮ ಶೆಟ್ಟಿ ಅವರಿಗೆ ಸಹಕಾರ ರತ್ನ ಪ್ರಶಸ್ತಿ

ಬೆಳ್ವೆ: ಕರ್ನಾಟಕ ಸರ್ಕಾರ ಸಹಕಾರ ಕ್ಷೇತ್ರದಲ್ಲಿನ ಸಾಧನೆಗಾಗಿ ಕೊಡಲ್ಪಡುವ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ-2026 ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ ಅವರಿಗೆ ಲಭಿಸಿದೆ.

ಬೆಂಗಳೂರಿನಲ್ಲಿ
ನ.14 ರಂದು ನಡೆಯಲಿರುವ ಅಖಿಲ ಭಾರತ ಸಹಕಾರಿ
ಸಪ್ತಾಹದಲ್ಲಿ ಪ್ರಶಸ್ತಿ ಪ್ರಶಸ್ತಿ
ಪಡೆಯಲಿದ್ದಾರೆ.
ಎಸ್.ಜಯರಾಮ ಶೆಟ್ಟಿ ಅವರು ಕಳೆದ ಮೂರು ದಶಕಗಳಿಂದ
ಸಹಕಾರ ಕ್ಷೇತ್ರದಲ್ಲಿ ಸಕ್ರೀಯವಾಗಿ
ತೊಡಗಿಸಿಕೊಂಡಿದ್ದಾರೆ.ಬೆಳ್ವೆಯಲ್ಲಿ ಪ್ರಧಾನ
ಕಚೇರಿ, ಹಾಲಾಡಿ, ಅಲ್ಬಾಡಿ, ಹೆಂಗವಳ್ಳಿ, ಶೇಡಿಮನೆಯಲ್ಲಿ
ಶಾಖೆಗಳು ಹಾಗೂ ಸದಸ್ಯರ ಅನುಕೂಲಕ್ಕಾಗಿ
ಪಡಿತರ ವಿತರಣಾ ಕೇಂದ್ರಗಳಿವೆ. ರೈತರಿಗೆ ಕೃಷಿಗೆ ಪೂರಕವಾಗಿ ಸಾಲ
ಸೌಲಭ್ಯಗಳು, ಯಂತ್ರೋಪಕರಣಗಳನ್ನು
ರಿಯಾಯತಿ ದರದಲ್ಲಿ ಬಾಡಿಗೆಗೆ ನೀಡಿ
ಪ್ರೋತ್ಸಾಹಿಸುತ್ತಿದ್ದಾರೆ. ರೈತಮಿತ್ರ ಮರದ ಗಾಣದ ಶುದ್ಧ ತೆಂಗಿನೆಣ್ಣೆ ಘಟಕ, ಸದಸ್ಯರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಧನ, ಸದಸ್ಯರಿಗೆ ವಿವಿಧ ಸಾಲ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಿರುತ್ತಾರೆ.
ಸಹಕಾರಿ ಸಂಘವು ಸಾರ್ಥಕ 50 ವರ್ಷಗಳ
ಸೇವೆಯನ್ನು ಸಲ್ಲಿಸಿದ ಹಿನ್ನಲೆಯಲ್ಲಿ ಬೆಳ್ವೆ ತಾರಿಕಟ್ಟೆ ಕ್ರಾಸ್ ಬಳಿಯ ಎಚ್ ಪಿ ಪೆಟ್ರೋಲ್ ಬಂಕಿನ ಎದುರಿನ ಸಂಘದ ಸ್ವಂತ ಸ್ಥಳದಲ್ಲಿ ಇತ್ತೀಚೆಗೆ ಸುವರ್ಣ ಮಹೋತ್ಸವ,ಸುವರ್ಣ ಸೌಧಕ್ಕೆ ಶಿಲಾನ್ಯಾಸ, ಅಂಬ್ಯುಲೈನ್ಸ್ ಉಚಿತ ಸೇವೆ ಸೇರಿದಂತೆ ಇನ್ನಿತರ ಜನೋಪಯೋಗಿ ಉತ್ತಮ ಸೇವೆಯೊಂದಿಗೆ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘವನ್ನು ರೈತಸ್ನೇಹಿಯಾಗಿ ರೂಪಿಸುವಲ್ಲಿ ಶ್ರಮಿಸಿರುತ್ತಾರೆ. ತೀರಾ ಗ್ರ‍್ರಾಮೀಣ ಪ್ರದೇಶದ ಕಾರ್ಯಕ್ಷೇತ್ರವನ್ನು ಹೊಂದಿರುವ ಬೆಳ್ವೆ
ವ್ಯವಸಾಯ ಸೇವಾ ಸಹಕಾರಿ ಸಂಘವನ್ನು ವಿವಿಧ ಪ್ರಯೋಗಶಿಲತೆಯ ಮೂಲಕ ಯಶಸ್ಸಿನೊಂದಿಗೆ ಇದೀಗ ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.

Team Udayaprabha
";