
ಬೆಳ್ವೆ : ಪುರಾಣ ಪ್ರಸಿದ್ದ ಪಂಚ ಶಂಕರನಾರಾಯಣ ಕ್ಷೇತ್ರಗಳಲ್ಲಿ ಒಂದಾದ ಬೆಳ್ವೆ ಶ್ರೀಶಂಕರನಾರಾಯಣ ದೇವಸ್ಥಾನಕ್ಕೆ ಸಂಪರ್ಕದ ಬೈಂದೂರು- ವಿರಾಜಪೇಟೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಶ್ರೀ ಶಂಕರನಾರಾಯಣ ಹೋಳಿ ಕೂಡುಕಟ್ಟು ಸಮಿತಿ ಸೆಟ್ಟೋಳಿ,ಅಬ್ಲಿಕಟ್ಟೆ, ಶ್ರೀಮಲ್ಲಿಕಾರ್ಜುನ ಯುವ ಸಂಘಟನೆ ಸೆಟ್ಟೋಳಿ ಅಬ್ಲಿಕಟ್ಟೆ ಇವರ ಕೊಡುಗೆಯಾಗಿ ಅಲ್ಬಾಡಿ ಶ್ಯಾಮಿಯಾನ ಶಂಕ್ರಣ್ಣ ಇವರ ಸ್ಮರಣಾರ್ಥ ಶ್ರೀ ಶಂಕರನಾರಾಯಣ ದೇವರಿಗೆ ರೂ.30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಭವ್ಯ ರಾಜ ಗೋಪುರವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗೋಪುರದ ಶಿಖರ ಕಲಶ ಪ್ರತಿಷ್ಠಾಪನೆಯೊಂದಿಗೆ ಸೋಮವಾರ ಲೋಕಾರ್ಪಣೆಗೊಂಡಿದೆ.