ಬೆಳಗಾವಿ: ನ,15 ರ ಶನಿವಾರದಂದು ಮುಂಜಾನೆ 9-30ಕ್ಕೆ ಪಾಟೀಲ ಬೀದಿಯಲ್ಲಿರುವ ಉಷಾತಾಯಿ ಗೋಗಟೆ ಪ್ರೌಢಶಾಲೆಯ ಸಭಾಭವನದಲ್ಲಿ ಪ್ರೌಢಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ದಾಸರ ಪದಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸ್ಪರ್ಧಿಗಳು ಬೆಳಗಾವಿ ತಾಲೂಕಿನವರಾಗಿರಬೇಕು. ಕಡ್ದಾಯವಾಗಿ ಅಂಕಿತನಾಮವಿರುವ ದಾಸರ ಪದಗಳನ್ನೇ ಹಾಡಬೇಕು. ಪ್ರತಿ ಸ್ಪರ್ಧಿಗೆ ಐದು ನಿಮಿಷ ಕಾಲಾವಕಾಶವಿರುತ್ತದೆ. ಪಕ್ಕ ವಾದ್ಯ ಬಳಿಸುವಂತಿಲ್ಲ (ಶೃತಿ ಪೆಟ್ಟಿಗೆ ಬಳಿಸಬಹುದು) ನಿರ್ಣಾಯಕರ ತಿರ್ಮಾನವೇ ಅಂತಿಮ. ಯಾವುದೇ ಚರ್ಚೆಗೆ ಅವಕಾಶವಿಲ್ಲ. ಹೀಗೆ ಸ್ಪರ್ಧೆ ನಿಯಮಗಳಿದ್ದು ಸ್ಪರ್ಧೆಯಲ್ಲಿ ವಿಜೆತರಾದವರಿಗೆ ಪ್ರಥಮ (ರೂ. 1೦೦೦, ದ್ವಿತೀಯ (ರೂ. 75೦) ಮತ್ತು ತೃತೀಯ (ರೂ. 5೦೦) ಮೂರು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಎಲ್ಲ ಮಕ್ಕಳಿಗೂ ಭಾಗವಹಿಸಿದ್ದಾಗಿ ಪ್ರಮಾಣಪತ್ರ ನೀಡಲಾಗುವುದು.
ಸ್ಪರ್ಧಾ ಸ್ಥಳದಲ್ಲಿಯೇ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಸಂಯೋಜಕ ಡಾ. ಶ್ರೀಧರ ಹುಕ್ಕೇರಿ (ಮೊ. 94487 05925) ಸಂಪರ್ಕಿಸಬಹುದು.


,
,

















