| Latest Version 9.0.7 |

State News

ವಿದ್ಯಾರ್ಥಿಗಳಿಗೆ ಶಿಸ್ತು- ಆತ್ಮವಿಶ್ವಾಸ ಬಹಳ ಮುಖ್ಯ

ಹೆಬ್ರಿ:

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾ ಸಂಸ್ಥೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕರಿಯರ್ ಗೈಡೆನ್ಸ್ ಕಾರ್ಯಕ್ರಮ ನಡೆಸಲಾಯಿತು. ಮೈಟ್ ಮೂಡುಬಿದ್ರೆಯ ಪ್ರೊಫೆಸರ್ ಗಣೇಶ್ ಮೊಗವೀರ ಉದ್ಯೋಗ ಮಾರ್ಗದರ್ಶನವನ್ನು ನೀಡುತ್ತಾ ಮಾತನಾಡಿ , ಎಸ್ ಎಸ್ ಎಲ್ ಸಿ ನಂತರ ಹೆಚ್ಚು ಉದ್ಯೋಗಾವಕಾಶಗಳು ಇರುವ ವಿಷಯವನ್ನು ಆಯ್ಕೆ ಮಾಡಿಕೊಂಡು ಓದಬೇಕು . ವಿದ್ಯಾರ್ಥಿಗಳಿಗೆ ಶಿಸ್ತು ಆತ್ಮವಿಶ್ವಾಸ ಬಹಳ ಮುಖ್ಯ. ಜೊತೆಗೆ ಆರೋಗ್ಯದ ಅರಿವು , ನೆಮ್ಮದಿಯ ಜೀವನ ನಡೆಸುವ ಜಾಣ್ಮೆ ಅತ್ಯಂತ ಅವಶ್ಯಕ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಜೋಗಿ, ಮೈಟ್ ಮೂಡುಬಿದ್ರೆಯ ವಿನೋದ್ ಕುಮಾರ್ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಆಂಗ್ಲ ಭಾಷೆ ಉಪನ್ಯಾಸಕಿ ಚಂದ್ರಕಲಾ ಅವರು ನಿರೂಪಿಸಿ ವಂದಿಸಿದರು. ಉಪನ್ಯಾಸಕ ಚಂದ್ರಹಾಸ್ ಸಹಕರಿಸಿದರು.

Team Udayaprabha
";