| Latest Version 9.0.7 |

Crime News

ಶ್ರೀಶೈಲ ದರ್ಶನ ಮುಗಿಸಿ ಬರುವಾಗ ಭೀಕರಅಪಘಾತ: ಚಿಕ್ಕೋಡಿಯ ಮೂವರು ಸಾವು

 

ಬೆಳಗಾವಿ: ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ದರ್ಶನಕ್ಕೆ ತೆರಳಿ ವಾಪಸ್ ಬರುವಾಗ ಆಂಧ್ರಪ್ರದೇಶ ಮಾರ್ಕಪುರಂ ಜಿಲ್ಲೆಯ ತಿಪ್ಪಾಯಪಲಂ ಬಳಿ ಸಂಭವಿಸಿದ ವಾಹನ ಅಪಘಾತದಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಮೂಲದ ಮೂವರು ಮೃತಪಟ್ಟಿದ್ದಾರೆ.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಅಜೀತ ಸಾತವಾರ(28), ಅಲಕಾ ಶಿಂಧೆ(60) ಮತ್ತು ಗೌರವ ಶಹಾ(40) ಎಂಬುವರು ಮೃತಪಟ್ಟಿದ್ದಾರೆ. ಗಾಯಗೊಂಡವರು ಆಂಧ್ರಪ್ರದೇಶದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಕ್ಸಂಬದಿಂದ ಒಟ್ಟು 14 ಜನ ಕ್ರೂಸರ್ ಮೂಲಕ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ದರ್ಶನಕ್ಕೆ ತೆರಳಿದ್ದರು. ದರ್ಶನ ಪಡೆದು ವಾಪಸ್‌ ಊರಿಗೆ ಬರುವಾಗ ಇವರು ಇದ್ದ ಕ್ರೂಸರ್ ಲಾರಿಗೆ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ.

Team Udayaprabha
";