| Latest Version 9.0.7 |

Crime News

ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

 

 

ಬೆಳಗಾವಿ: ಸಮೀಪದ ದೇಸೂರು- ಖಾನಾಪುರ ರೈಲು ನಿಲ್ದಾಣಗಳ ಮಧ್ಯೆ ಶುಕ್ರವಾರ 35 ರಿಂದ 40 ವಯಸ್ಸಿನ ಅಪರಿಚಿತ ವ್ಯಕ್ತಿ ಚಲಿಸುವ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ ಎಂದು ಬೆಳಗಾವಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

 

5.6 ಅಡಿ ಎತ್ತರ, ಸಾದಾಗಪ್ಪು ಮೈ ಬಣ್ಣ, ತೆಳ್ಳಗಿನ ಮೈಕಟ್ಟು, ಉದ್ದ ಮುಖ, ಕಪ್ಪು ಕೂದಲು ಇದ್ದು, ಎಡಗೈ ಮೇಲೆ ಇಂಗ್ಲಿಷ್‌ನಲ್ಲಿ ಅಜಯ ಎಂದು, ಬಲಗೈ ಮೇಲೆ ಗುಜರಾತಿ ಭಾಷೆಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ಸಂಬಂಧಿಕರು ಇದ್ದಲ್ಲಿ 0831-2405273, (9480802127) ಅವರನ್ನು ಸಂಪರ್ಕಿಸಲು ಕೋರಲಾಗಿದೆ.

Team Udayaprabha
";