ಬೆಳಗಾವಿ: ನಗರದ ಕೆಎಲ್ಇ. ಸಂಸ್ಥೆಯ, ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ಸರ್ ಸಿ ವಿ ರಾಮನ್ ಸಭಾಂಗಣದಲ್ಲಿ ಮಂಗಳವಾರ 2026- 27 ನೇ ಸಾಲಿನ ಬಿ ಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ದೀಕ್ಷಾರಂಭ ಎರಡನೆಯ ದಿನದ ಕಾರ್ಯಕ್ರಮ ಆಯೋಜಿಸಲಾಗಿತ್ತು .
ಹುಬ್ಬಳ್ಳಿಯ ಪ್ರೇರಣಾ ಸಂಸ್ಥೆಯ ಮುಖ್ಯಸ್ಥ ಪ್ರವೀಣ ಗುಡಿ ಸಂಪನ್ಮೂಲ ವ್ಯಕ್ತಿ ಮಾತನಾಡಿ, ಸಂವಹನದ ವಿವಿಧ ಕೌಶಲ್ಯಗಳು ಮತ್ತು ನಾಯಕತ್ವದ ಗುಣಗಳು ಸ್ವ ಸಾಮರ್ಥ್ಯದ ಸಕಾರಾತ್ಮಕವಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರತಿಯೊಂದು ವಿದ್ಯಾರ್ಥಿಗೂ ಗುರಿ ಇರಬೇಕು. ಜೀವನ ಉದ್ದಕ್ಕೂ ಕಲಿಕೆ ನಿರಂತರವಾಗಿರಬೇಕು. ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳು ಅನೇಕ ವಿಷಯದಲ್ಲಿ ಸಂವಾದ ಚರ್ಚೆ ಮಾಡುತ್ತಿರಬೇಕು. ವಿದ್ಯಾರ್ಥಿಗಳ ಸ್ಪೂರ್ತಿದಾಯಕ ಮಾತುಗಳಿಂದ ಜೀವನ ರೂಪಿಸಿಕೊಳ್ಳಬೇಕು. ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ಸು ಗಳಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯೆ ಡಾ. ಜ್ಯೋತಿ ಕವಳೇಕರ ಮಾತನಾಡಿ,
ಗುಣಾತ್ಮಕ ಸಂಪನ್ಮೂಲ ವ್ಯಕ್ತಿಗಳಿಂದ ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡು ವಿದ್ಯಾರ್ಥಿಗಳು ಮುನ್ನಡೆಯಬೇಕು. ಯುವಕರು ವಿವಿಧ ವಿಷಯಗಳ ಬಗ್ಗೆ ಪರಿಪೂರ್ಣವಾದ ಜ್ಞಾನವನ್ನು ಹೊಂದಿರಬೇಕೆಂದು ಕರೆ ನೀಡಿದರುಸ್ನೇಹಾ ಪ್ರಾರ್ಥಿಸಿದರು.ಡಾ. ಮಹೇಶ್ ಬುರುಡ ಸ್ವಾಗತಿಸಿದರು ಡಾ ದಿನೇಶ್ ಪಾಟೀಲ ಪರಿಚಯಿಸಿದರು. ನೇಹಾ ಪಾಟೀಲ ವಂದಿಸಿದರು. ರಚನಾ ಶೇರಿ ನಿರೂಪಿಸಿದರು.
ಸಮಾರಂಭದಲ್ಲಿ ಮಹಾವಿದ್ಯಾಲಯದ ಎಲ್ಲಾ ಸಿಬ್ಬಂದಿಯವರು ಹಾಗೂ ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Udaya Prabha > State News > ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರವೀಣ ಗುಡಿ ಸಲಹೆ
ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರವೀಣ ಗುಡಿ ಸಲಹೆ
Team Udayaprabha21/07/2026
posted on

the authorTeam Udayaprabha
All posts byTeam Udayaprabha
Leave a reply

,
,

















