| Latest Version 9.0.7 |

State News

ನೀಟ್ ಪರೀಕ್ಷೆಯಲ್ಲಿ ಹೊಸಮನಿ ಸಹೋದರಿಯರ ಸಾಧನೆ

ಬೆಳಗಾವಿ: ಗೋಕಾಕ ತಾಲೂಕಿನ ಕೌಜಲಗಿ ಪಟ್ಟಣದ ಲಿಂಗಾಯತ ಧರ್ಮಿಯ ಮಾಳಿ ಸಮಾಜದ ಹೊಸಮನಿ ಕುಟುಂಬದ ಸಹೋದರಿಯರು ಇತ್ತೀಚಿಗೆ ನಡೆದ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪುಂಡಲಿಕ ಹೊಸಮನಿ ಅವರ ಪುತ್ರಿಯರಾದ ಭಾಗ್ಯಾ 604 ಮತ್ತು ಸ್ವಾತಿ

516 ಅಂಕ ಪಡೆದು ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾಗಿದ್ದಾರೆ. ಕವಿ-ಸಾಹಿತಿ ಪ್ರಕಾಶ ಕೋಚಿನತೋಟ, ಮಾಳಿ ಸಮಾಜದ ಅಧ್ಯಕ್ಷ ನೀಲಪ್ಪ ಶಂಕರ ಚಚಡಿ, ಬಿ.ಬಿ. ಹೊಸಮನಿ,ಅಶೋಕ ಹೊಸಮನಿ ಮುಂತಾದವರು ಅಭಿನಂದಿಸಿದ್ದಾರೆ.

Team Udayaprabha
";