| Latest Version 9.0.7 |

State News

ಹೆಬ್ರಿ ಅಮೃತ ಭಾರತಿ : ಹಾವು ನಾವು ಕಾರ್ಯಕ್ರಮ

ಹೆಬ್ರಿ: ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಇಕೋ ಕ್ಲಬ್ ವತಿಯಿಂದ ಹಾವು ನಾವು ಎಂಬ ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಉರಗ ತಜ್ಞ ಡಾ I ಗುರುರಾಜ್ ಸನಿಲ್ ಆಗಮಿಸಿದರು.

ಡಾI ಗುರುರಾಜ್ ಸನಿಲ್ ಮಾತನಾಡಿ, ಹಾವುಗಳು ಮನೆಗೆ ಬರುವುದು ಆಹಾರಕ್ಕಾಗಿ ಎಂದರು. ಒಂದು ಹಾವನ್ನು ಕೊಂದರೆ ಆ ಜಾಗಕ್ಕೆ ಅದೇ ಜಾತಿಯ ಬೇರೆ ಹಾವುಗಳು ಬರುತ್ತವೆ ಎಂದು ಮಾಹಿತಿ ನೀಡಿದರು.
ಹಾವುಗಳ ಕುರಿತು ವಿಡಿಯೋಗಳ ಮೂಲಕ ರೋಚಕ ವಿಚಾರಗಳನ್ನು ಬಿಚ್ಚಿಟ್ಟರು. ಪ್ರಶ್ನೋತ್ತರ ವೇಳೆಯಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ವಿಸ್ತಾರವಾಗಿ ವಿವರಣೆ ನೀಡಿದರು
ಪ್ರಾಂಶುಪಾಲ ಪ್ರಕಾಶ್ ಜೋಗಿ ಸಂಪನ್ಮೂಲ ವ್ಯಕ್ತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ವಿದ್ಯಾರ್ಥಿಗಳಾದ ಅವನಿ ನಿರೂಪಿಸಿ, ಸ್ವಾಗತಿಸಿದರು. ತಸ್ವಿ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ರಚಿತಾ ವಂದಿಸಿದರು.

Team Udayaprabha
";