| Latest Version 9.0.7 |

Local News

ಕರ್ನಾಟಕ ಪರ ಗೊತ್ತುವಳಿ ಸಚಿವರಿಗೆ ಸನ್ಮಾನ

 

 

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಒತ್ತಾಯಿಸಿ ಕನ್ನಡ ಸಂಘಟನೆಗಳು ನಡೆಸಿದ ಆರು ತಿಂಗಳ ಹೋರಾಟವನ್ನು ಕಾಲಕಾಲಕ್ಕೆ ಬೆಂಬಲಿಸಿದ ಹಾಗೂ ರಾಜ್ಯ ಸರಕಾರ

ಪಾಲಿಕೆಗೆ ಆದೇಶ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ರವಿವಾರ ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸಮಾನ ಮನಸ್ಕ ಕನ್ನಡ ಸಂಘಟನೆಗಳ ಪರವಾಗಿ ಸನ್ಮಾನಿಸಿ

ಅಭಿನಂದಿಸಲಾಯಿತು.

ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ,

ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ

ಮಾಸೇನಟ್ಟಿ,ಕನ್ನಡ ಹೋರಾಟಗಾರರಾದ ಮಲ್ಲಪ್ಪ ಗುಡಗೇನಟ್ಟಿ,ಎಸ್.ಎಸ್.ಮೂಕನವರ,ಆನಂದ ಬಿಲಾವರ,ಸಂತೋಷ ಮಾಸೇನಟ್ಟಿ,ಬೆಳಗಾವಿ ಮಹಾನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜಾ ಸಲೀಂ ಮುಂತಾದವರು ಉಪಸ್ಥಿತರಿದ್ದರು.

Team Udayaprabha
";