ಬೆಳಗಾವಿ:
“ಶಿಕ್ಷಕರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದು ಹೆಮ್ಮೆಯ ಸಂಗತಿ. ತಾಯಿ ಮಗುವಿನ ಮೊದಲ ಗುರುವಾದರೆ, ಶಿಕ್ಷಕರು ಎರಡನೇ ತಾಯಿಯಿದ್ದಂತೆ. ಶಿಕ್ಷಕರು ಜ್ಞಾನವನ್ನು ನೀಡುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿಯನ್ನು ಹೊಂದಿದ್ದಾರೆ” ಎಂದು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕಿ ಪ್ರೊ. ಕವಿತಾ ಕುಸುಗಲ್ಲ ಹೇಳಿದರು.
ಮಂಗಳವಾರ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ 2026ನೇ ಸಾಲಿನ ನಾಲ್ಕನೇ ಸೆಮಿಸ್ಟರ್ ಪ್ರಶಿಕ್ಷಣಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಮೂರು ದಿನಗಳ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಾನವನಿಗೆ ಅಪಾರವಾದ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯವಿದ್ದರೂ, ಅವನ ಬದುಕಿನಲ್ಲಿ ಮಾನವೀಯ ಮೌಲ್ಯಗಳಿಗೆ ಪ್ರಮುಖ ಸ್ಥಾನವಿರಬೇಕು. ಎಲ್ಲ ಸೌಲಭ್ಯಗಳಿದ್ದರೂ ಮಾನವೀಯತೆ ಇಲ್ಲದ ಜೀವನ ನಿರರ್ಥಕವಾಗುತ್ತದೆ. ಜಾತಿ, ಲಿಂಗ, ಧರ್ಮ ಹಾಗೂ ಇತರ ಭೇದಗಳನ್ನು ಮೀರಿ ಮನುಷ್ಯನು ಮಾನವೀಯತೆಯೊಂದಿಗೆ ಬದುಕಬೇಕು ಎಂದು ಅವರು ಹೇಳಿದರು.
ಕುವೆಂಪು, ದ.ರಾ. ಬೇಂದ್ರೆ ಹಾಗೂ ವಿಲಿಯಂ ಶೇಕ್ಸ್‌ಪಿಯರ್ ಸೇರಿದಂತೆ ಹಲವು ಪ್ರಖ್ಯಾತ ಕವಿಗಳ ಕವನಗಳನ್ನು ವಾಚಿಸಿದ ಅವರು, ಅವುಗಳಲ್ಲಿ ಅಡಗಿರುವ ಮಾನವೀಯ ಮೌಲ್ಯಗಳು, ಜೀವನ ದರ್ಶನ ಹಾಗೂ ಸಾಮಾಜಿಕ ಸಂದೇಶಗಳನ್ನು ಪರಿಣಾಮಕಾರಿಯಾಗಿ ವಿಶ್ಲೇಷಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾಂತೇಶ ನಗರ ರಹವಾಸಿಗಳ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ಗುರುವ ಮಾತನಾಡಿ, “ಸಂಸ್ಕಾರವು ಶಿಕ್ಷಣಕ್ಕೆ ಭೂಷಣ. ಪೌರತ್ವ ತರಬೇತಿ ಶಿಬಿರವು ಪ್ರಶಿಕ್ಷಣಾರ್ಥಿಗಳಲ್ಲಿ ಉತ್ತಮ ಸಂಸ್ಕಾರ, ಜವಾಬ್ದಾರಿಯುತ ಪೌರತ್ವದ ಗುಣಗಳು ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಲು ಸಹಕಾರಿಯಾಗುತ್ತದೆ” ಎಂದು ಹೇಳಿದರು.
ಆಧ್ಯಾತ್ಮಿಕ ಜ್ಞಾನದಿಂದ ವ್ಯಕ್ತಿತ್ವ ವಿಕಸನ
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಗುರುಸಿದ್ಧ ಸ್ವಾಮಿಜಿ ಅವರು, “ಶಿಕ್ಷಕರು ಕೇವಲ ಪುಸ್ತಕ ಜ್ಞಾನಕ್ಕೆ ಸೀಮಿತರಾಗದೆ ಲೌಕಿಕ ಜ್ಞಾನವನ್ನು ಹೊಂದಬೇಕು. ಆಧ್ಯಾತ್ಮಿಕ ಜ್ಞಾನವು ವ್ಯಕ್ತಿಯ ಚಿಂತನೆ, ನಡವಳಿಕೆ ಹಾಗೂ ವ್ಯಕ್ತಿತ್ವವನ್ನು ಮತ್ತಷ್ಟು ಸಮೃದ್ಧಿಗೊಳಿಸುತ್ತದೆ” ಎಂದು ತಿಳಿಸಿದರು.
ಶಿಬಿರದ ಮಹಾದಂಡನಾಯಕಿ ಡಾ. ನಿರ್ಮಲಾ ಜಿ. ಬಟ್ಟಲ ಪ್ರಾಸ್ತಾವಿಕವಾಗಿ ಮಾತನಾಡಿ, ಮೂರು ದಿನಗಳ ಪೌರತ್ವ ತರಬೇತಿ ಶಿಬಿರದ ಉದ್ದೇಶಗಳಾದ ಸಹಕಾರ, ಮಾನವೀಯತೆ, ರಾಷ್ಟ್ರೀಯ ಭಾವೈಕ್ಯತೆ, ಸ್ನೇಹ, ಪ್ರೀತಿ , ಕರುಣೆ ಹಾಗೂ ನಾಯಕತ್ವದ ಬಗ್ಗೆ ಹಾಗೂ ಶಿಬಿರದ ಆಶಯಗಳು ಹಾಗೂ ವಿವಿಧ ಕಾರ್ಯಕ್ರಮಗಳ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ಪರಿಚಯಿಸಿದರು.
ಪ್ರಿಯಾಂಕಾ ಅನಗೋಳಕರ ಪ್ರಾರ್ಥಿಸಿದರು. ಶಿಬಿರದ ಕಾರ್ಯದರ್ಶಿ ಲಕ್ಕಪ್ಪ ಬಸರಗಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಕೆಳಗಿನಮನಿ ಪರಿಚಯಿಸಿದರು. ಶಿಬಿರದ ಉಪ ಕಾರ್ಯದರ್ಶಿ ಭಾಗ್ಯಾ ಪರ್ವತಗೌಡ್ರ ವಂದಿಸಿದರು. ಮುಸ್ಕಾನ ಲಾಡನವರ ಹಾಗೂ ಸುಮಾ ಹವಾಲ್ದಾರ ನಿರೂಪಿಸಿದರು.
Udaya Prabha > Local News > ಶಿಕ್ಷಕರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದು ಹೆಮ್ಮೆಯ ಸಂಗತಿ : ಪ್ರೊ. ಕವಿತಾ ಕುಸುಗಲ್ಲ
ಶಿಕ್ಷಕರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದು ಹೆಮ್ಮೆಯ ಸಂಗತಿ : ಪ್ರೊ. ಕವಿತಾ ಕುಸುಗಲ್ಲ
Team Udayaprabha29/09/2026
posted on

the authorTeam Udayaprabha
All posts byTeam Udayaprabha
Leave a reply
Related News
ಹೆಬ್ರಿ ಎಸ್.ಆರ್: ಗಾಂಧಿ ಜಯಂತಿ
02/10/2026
ಹೆಬ್ರಿ ಎಸ್.ಆರ್. : ಕರಾಟೆ ಪರೀಕ್ಷೆ
29/09/2026
ಮಹತ್ವ ಪಡೆದ ಮಹಾನಗರಪಾಲಿಕೆ ಸಭೆ
29/09/2026

,


















