| Latest Version 9.0.7 |

Local News

ಅಂತರ್ ಕಾಲೇಜು ಟೇಬಲ್ ಟೆನಿಸ್‌ನಲ್ಲಿ ಆರ್.ಎಲ್. ವಿಜ್ಞಾನ ಸಂಸ್ಥೆ ಸಾಧನೆ

 

 

ಬೆಳಗಾವಿ : ನಗರದ ಕೆಎಲ್ಇ. ಸಂಸ್ಥೆ ಯ ರಾಜಾ ಲಖಮಗೌಡ ವಿಜ್ಞಾನ ಸಂಸ್ಥೆ (ಸ್ವಾಯತ್ತ), ಮಹಾವಿದ್ಯಾಲಯ ವು ಪುರುಷರ ಟೇಬಲ್ ಟೆನಿಸ್ ತಂಡವು ದ್ವಿತೀಯ ಸ್ಥಾನ ಹಾಗೂ ಮಹಿಳಾ ತಂಡವು ತೃತೀಯ ಸ್ಥಾನ ಪಡೆದುಕೊಂಡಿವೆ.

 

ಬೆಳಗಾವಿ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಆಯೋಜಿಸಿದ್ದ ಅಂತರ್ ಕಾಲೇಜು ಟೇಬಲ್ ಟೆನಿಸ್ ಪಂದ್ಯಾವಳಿ ಸೆಪ್ಟಂಬರ್ 25 ಮತ್ತು 26 ರಂದು ನಿಪ್ಪಾಣಿ ಕೆ.ಎಲ್.ಇ. ಸಂಸ್ಥೆಯ ಜಿ.ಐ. ಬಾಗೇವಾಡಿ ಕಾಲೇಜುದಲ್ಲಿ ಜರುಗಿದ್ದವು.

 

ಸಂಸ್ಥೆಯ ಬಿ.ಎಸ್ಸಿ. ತೃತೀಯ ವರ್ಷದ ಕು. ಪ್ರಿಯಾಂಕಾ ಪಾಟೀಲ ಹಾಗೂ ಬಿ.ಎಸ್ಸಿ. ಪ್ರಥಮ ವರ್ಷದ ಕ್ರಿಸ್ತಾನಾ ಮೇಖಲಿ ಅವರು ವಿಶ್ವವಿದ್ಯಾಲಯ ಬ್ಲೂಗೆ ಆಯ್ಕೆಯಾಗಿದ್ದಾರೆ.

 

ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಚಾರ್ಯ ಡಾ. ಜೆ.ಎಸ್. ಕವಳೇಕರ ಐಕ್ಯೂಎಸಿ ಸಂಯೋಜಕ ಡಾ. ವಿನಯಕುಮಾರ ಎಂ., ಜಿಮ್ಖಾನಾ ಅಧ್ಯಕ್ಷ ಪ್ರೊ. ಎಚ್.ಎನ್. ಬನ್ನೂರ ಹಾಗೂ ದೈಹಿಕ ಶಿಕ್ಷಣ ಕ್ರೀಡಾ ನಿರ್ದೇಶಕ ಡಾ. ಶಿವಾನಂದ ಎಂ. ಬುಲಬುಲಿ ಅಭಿನಂದಿಸಿದ್ದಾರೆ.

Team Udayaprabha
";