ಬೆಳಗಾವಿ : ಬುಧವಾರ 30.9.2026 ರಂದು ನಡೆಯುವ
ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ಸಭೆಯು
ಅತ್ಯಂತ ಮಹತ್ವ ಪಡೆದುಕೊಂಡಿದ್ದು ಬೆಳಗಾವಿ ಕಂದಾಯ ಉಪ ವಿಭಾಗದ ಹಿರಿಯ ಉಪ ವಿಭಾಗಾಧಿಕಾರಿ ಶ್ರವಣ ನಾಯ್ಕ ಅವರನ್ನು ಸಭೆಯ ವೀಕ್ಷಕರನ್ನಾಗಿ
ನೇಮಿಸಿ ಜಿಲ್ಲಾಧಿಕಾರಿ ಮೊಹ್ಮದ ರೋಷನ್ ಅವರು ಇಂದು ಆದೇಶ ಹೊರಡಿಸಿದ್ದಾರೆ.
ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಯನ್ನು ಅಂಗೀಕರಿಸಬೇಕೆಂದು ರಾಜ್ಯ ಸರಕಾರ ನೀಡಿರುವ ಆದೇಶದಂತೆ ಬುಧವಾರದ ಸಭೆಯ ವಿಷಯ ಪಟ್ಟಿಯಲ್ಲಿ
10 ನೆ ವಿಷಯವನ್ನಾಗಿ ಸೇರ್ಪಡೆ ಮಾಡಲಾಗಿದೆ.
ರಾಜ್ಯ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಸೂಚನೆಯಂತೆ ಪಾಲಿಕೆಯ ಉಪಯುಕ್ತೆ ಲಕ್ಷಿ ನಿಪ್ಪಾಣಿಕರ ಅವರನ್ನು ವೀಕ್ಷಕರನ್ನಾಗಿ ನಿನ್ನೆ ಸೋಮವಾರ ನೇಮಿಸಿ ಪಾಲಿಕೆಯ ಆಯುಕ್ತರು
ನೇಮಕ ಮಾಡಿದ್ದರು.
ಉಪ ವಿಭಾಗಾಧಿಕಾರಿಗಳನ್ನು ವೀಕ್ಷಕರನ್ನಾಗಿ
ನೇಮಿಸಿರುವ ಕ್ರಮವನ್ನು ಬೆಳಗಾವಿ ಜಿಲ್ಲಾಧಿಕಾರಿಗಳ ಕ್ರಮವನ್ನು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಸ್ವಾಗತಿಸಿದ್ದಾರೆ.


,


















