| Latest Version 9.0.7 |

State News

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚಿನ್ಮಯ್ ಸುತಾರ್ 400 ರನ್ ಸಾಧನೆ

ಸೋವಿಮಾ (ನಾಗಾಲ್ಯಾಂಡ್): ಮಿಜೋರಾಂ ತಂಡದ ಬ್ಯಾಟರ್ ಚಿನ್ಮಯ್ ಸುತಾರ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 400 ರನ್‌ಗಳ ಸಾಧನೆ ಮಾಡಿದ್ದಾರೆ.

ಆ ಮೂಲಕ ಈ ಸಾಧನೆ ಮಾಡಿದ ಭಾರತದ ಎರಡನೇ ಬ್ಯಾಟ‌ರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ನಾಗಾಲ್ಯಾಂಡ್ ವಿರುದ್ಧದ ರಣಜಿ ಟ್ರೋಫಿ ಪ್ಲೇಟ್ ಗ್ರೂಪ್ ಪಂದ್ಯದ ಎರಡನೇ ದಿನದಾಟದಲ್ಲಿ ಅವರು ಈ ಚಾರಿತ್ರಿಕ ಸಾಧನೆ ಬರೆದರು.

1948ರಲ್ಲಿ ಕಥಿಯಾವಾರ್ ವಿರುದ್ಧದ ಪಂದ್ಯದಲ್ಲಿ ಮಹಾರಾಷ್ಟ್ರ ಪರ ಭಾವುಸಾಹೇಬ್ ಬಾಬಾಸಾಹೇಬ್ ನಿಂಬಾಳ್ಳರ್‌ ಅವರು ಅಜೇಯ 443 ರನ್ ಗಳಿಸಿದ್ದರು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಭಾರತೀಯ ಬ್ಯಾಟರ್‌ನ ಚೊಚ್ಚಲ 400 ರನ್ ಸಾಧನೆಯಾಗಿತ್ತು.

ಈ ಹಿಂದೆ ಮುಂಬೈ ಪರ ವಿಜಯ್ ಹಜಾರೆ ಟ್ರೋಫಿ ಆಡಿ ಪ್ರಸ್ತುತ ಮಿಜೋರಾಂ ತಂಡವನ್ನು ಪ್ರತಿನಿಧಿಸುತ್ತಿರುವ ಸುತಾರ್, 517 ಎಸೆತಗಳಲ್ಲಿ 46 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ ಅಜೇಯ 400 ರನ್ ಕಲೆಹಾಕಿದರು.

ಇವರ ಭರ್ಜರಿ ಬ್ಯಾಟಿಂಗ್ ಬಲದಿಂದ ಮಿಜೋರಾಂ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 581 ರನ್ ಗಳಿಸಿ ಡಿಕೇರ್ ಮಾಡಿಕೊಂಡಿತು.

ತಂಡದ ಮೊತ್ತ 392 ರನ್ ಆಗಿದ್ದಾಗ ಕೊನೆಯ ಬ್ಯಾಟರ್ ಲಾಲೊಂಪುಯಾ ಚಾಕ್ಕುವಾಕ್ ಕ್ರೀಸ್‌ಗೆ ಬಂದರು.

ಈ ವೇಳೆ 231 ರನ್ ಗಳಿಸಿ ಆಡುತ್ತಿದ್ದ ಸುತಾ‌ರ್, ಮುರಿಯದ 10ನೇ ವಿಕೆಟ್‌ಗೆ 189 ರನ್‌ಗಳ ಅಮೋಘ ಜೊತೆಯಾಟವಾಡಿದರು.

ಈ ಅಮೋಘ ಜೊತೆಯಾಟದಲ್ಲಿ ಚಾಕ್ಕುವಾಕ್ ಅಜೇಯ 14 ರನ್ ಗಳಿಸಿದರೆ, ಸುತಾರ್ ಒಬ್ಬರೇ 169 ರನ್ ಗಳಿಸಿದ್ದು ವಿಶೇಷ.

ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಮೊತ್ತ ದಾಖಲಿಸಿದ ವಿಶ್ವದಾಖಲೆ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಅವರ ಹೆಸರಿನಲ್ಲಿದೆ. 1994ರಲ್ಲಿ ಡರ್ಹ್ಯಾಮ್ ವಿರುದ್ಧ ವಾರ್ವಿಕ್‌ಪೈರ್ ಪರ ಲಾರಾ ಅಜೇಯ 501 ರನ್ ಸಿಡಿಸಿದ್ದರು.

ಇನ್ನಿಂಗ್ಸ್ ಒಂದರಲ್ಲಿ 400 ರನ್ ಗಡಿ ದಾಟಿದ ಇತರ ಪ್ರಮುಖ ಬ್ಯಾಟರ್‌ಗಳು:

ಹನೀಫ್ ಮೊಹಮ್ಮದ್: 499 ರನ್ (ಕರಾಚಿ ಪರ, 1959)

ಡಾನ್ ಬ್ರಾಡ್ಮನ್: 452* ರನ್ (ನ್ಯೂ ಸೌತ್ ವೇಲ್ಸ್ ដថ, 1930)

ಬಿಲ್ ಪೊನ್ಸ್‌ಫೋರ್ಡ್: 429 ರನ್ (1923) ಹಾಗೂ 437 ರನ್ (1927) – (ವಿಕ್ಟೋರಿಯಾ ಪರ)

ಅಫ್ತಾಬ್ ಬಲೋಚ್: 428 ರನ್ (ಸಿಂದ್ ಪರ, 1974)

ಸ್ಯಾಮ್ ನಾರ್ತ್‌ಈಸ್ಟ್: 410* ರನ್ (ಗ್ಲಾಮೊರ್ಗನ್ , 2022)

ಗ್ರೇಮ್ ಹಿಕ್: 405* ರನ್ (ವೊರ್ಸೆಸ್ಟರ್‌ಪೈ‌ರ್ ಪರ, 1988)

ಬ್ರಿಯಾನ್ ಲಾರಾ: 400* ರನ್ (ವೆಸ್ಟ್ ಇಂಡೀಸ್ ಪರ, 2004)

ಚಿನ್ಮಯ್ ಸುತಾರ್ ರಣಜಿ ಟ್ರೋಫಿ ಇನ್ನಿಂಗ್ಸ್‌ನಲ್ಲಿ 400 ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಆಗಿದ್ದಾರೆ.

ನಾಗಾಲ್ಯಾಂಡ್ ವಿರುದ್ಧ ಮಿಜೋರಾಂ ಪರ ಆಡುತ್ತಿದ್ದ ಅವರು 517 ಎಸೆತಗಳಲ್ಲಿ 46 ಬೌಂಡರಿ ಮತ್ತು ಏಳು ಸಿಕ್ಸರ್‌ಗಳೊಂದಿಗೆ ಅಜೇಯ 400 ರನ್ ಗಳಿಸಿದರು.

Team Udayaprabha
";