| Latest Version 9.0.7 |

Crime News

ಬೆಳಗಾವಿ: ಹೆಂಡತಿ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ ಪತಿ

 

ಬೆಳಗಾವಿ: ಪತ್ನಿ ಮತ್ತು ಆಕೆಯ ಕುಟುಂಬದವರ ಮೇಲೆ ಪತಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ನಡೆದಿದೆ.

ಯಲಿಹಡಲಗಿ ಗ್ರಾಮದ ಭೀಮಪ್ಪ ಭೋಸಲೆಯ ಕಿರುಕುಳಕ್ಕೆ ಬೇಸತ್ತು ಪತ್ನಿ ರಾಣಿ ತವರುಮನೆಗೆ ಬಂದಿದ್ದಳು. ಬೇಡ ಅಂದರೂ ಪತ್ನಿಯನ್ನು ತವರುಮನೆಗೆ ಹೋಗಿದ್ದಾರೆ ಎಂದು ಭೀಮಪ್ಪ ಸಿಟ್ಟು ಮಾಡಿಕೊಂಡಿದ್ದು, ಮನೆಯಲ್ಲಿದ್ದ ಆರು ಜನರ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ್ದಾನೆ. ಇದರಿಂದ ಸಂಜು ಸಾಳುಂಕೆ, ಶಂಕರ್, ಕೃಷ್ಣ ಸಾಳುಕೆ, ಅಂಕುಶ್ ಪಡತಾರೆ ಹಾಗೂ ಮನೋಹರ್ ಪಡತ್ತಾರೆ ಪತ್ನಿ ರಾಣಿ ಭೋಸಲೆಗೆ ಗಂಭೀರವಾದ ಗಾಯಗಳಾಗಿದೆ. ಗಾಯಾಳುಗಳನ್ನು ವಿಜಯಪುರದ ಬಿ ಎಲ್ ಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದೆ.

Team Udayaprabha
";