ನವದೆಹಲಿ: ವಿದೇಶಗಳಿಗೆ ಪ್ರವಾಸ ಮಾಡುವ ಭಾರತ ತಂಡದಲ್ಲಿ ಆಡುವ ವೈಭವ್ ಸೂರ್ಯವಂಶಿಯೊಂದಿಗೆ ಅವರ ಪಾಲಕರ ಪ್ರಯಾಣಕ್ಕೆ ಅನುಮತಿ ನಿಡಲಾಗಿದೆ.
15 ವರ್ಷದ ವೈಭವ್ ಅವರು ಮುಂಬರುವ ಸರಣಿಗಳಲ್ಲಿ ಐರ್ಲೆಂಡ್, ಇಂಗ್ಲೆಂಡ್ ಪ್ರವಾಸ ಹಾಗೂ ಏಷ್ಯನ್ ಕ್ರೀಡಾಕೂಟದಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈಚೆಗೆ ಮುಕ್ತಾಯವಾದ ಐಪಿಎಲ್ ಟೂರ್ನಿಯಲ್ಲಿ ಅವರು ‘ಆರೆಂಜ್ ಕ್ಯಾಪ್’ ಗಳಿಸಿದ್ದರು.
ಸದ್ಯ ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಕ್ರಿಕೆಟ್ ಸರಣಿಯಲ್ಲಿ ಆಡುತ್ತಿರುವ ಭಾರತ ‘ಎ’ ಬಳಗದಲ್ಲಿ ವೈಭವ್ ಇದ್ದಾರೆ.
‘ವೈಭವ್ ತಂದೆಯು ಭಾರತ ಎ ತಂಡದೊಂದಿಗೆ ಶ್ರೀಲಂಕಾಕ್ಕೆ ತೆರಳುವರು. ಒಂದೊಮ್ಮೆ ವೈಭವ್ ಪಾಲಕರು ಇಂಗ್ಲೆಂಡ್ ಮತ್ತು ಐರ್ಲೆಂಡ್ಗೆ ಹೋಗಲು ಇಚ್ಛಿಸಿದರೆ ಪ್ರಯಾಣದ ವ್ಯವಸ್ಥೆ ಮಾಡಲಾಗುವುದು. ವೈಭವ್ಗೆ ಪಾಲಕರೇ ಅತ್ಯುತ್ತಮ ಬೆಂಬಲಿಗರು’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ದೇವಜೀತ್ ಸೈಕಿಯಾ ತಿಳಿಸಿದ್ದಾರೆ.
ಭಾರತ ತಂಡವು ಜೂನ್ 26 ಮತ್ತು 28ರಂದು ಐರ್ಲೆಂಡ್ನಲ್ಲಿ ಎರಡು ಪಂದ್ಯಗಳನ್ನು ಆಡುವರು. ಜುಲೈ 1ರಿಂದ ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಸರಣಿ ನಡೆಯಲಿದೆ.


,


















