| Latest Version 9.0.7 |

Sports News

ವೈಭವ ಸೂರ್ಯವಂಶಿಯ ದೊಡ್ಡ ಕನಸು ಏನು ?

 

 

 

ಬೆಂಗಳೂರು :

ಟೀಮ್ ಇಂಡಿಯಾದ ಉದಯೋನ್ಮುಖ ಯುವ ಬ್ಯಾಟ‌ರ್, ಮೈದಾನದಲ್ಲಿ ಬೌಲರ್‌ಗಳ ಬೆವರಿಳಿಸುವ ವೈಭವ್‌ ಸೂರ್ಯವಂಶಿ ಇತ್ತೀಚೆಗೆ ಖಾಸಗಿ ವಾಹಿನಿಯೊಂದರ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಭವಿಷ್ಯದ ಕನಸುಗಳನ್ನು ಹಂಚಿಕೊಂಡಿದ್ದಾರೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ವೇಳೆಯಲ್ಲಿ ನಡೆದ “ಬೈಂಡ್ ಬ್ಯಾಂಕಿಂಗ್’ ಆಟದಲ್ಲಿ ಯಾವುದೇ ಮುನ್ಸೂಚನೆಯಿಲ್ಲದೆ ಎದುರಾದ ಕ್ರಿಕೆಟ್ ಸನ್ನಿವೇಶಗಳನ್ನು ತಮ್ಮ ಆದ್ಯತೆಗೆ ಅನುಗುಣವಾಗಿ ಬ್ಯಾಂಕ್ ಮಾಡಿದ್ದಾರೆ.

 

6 ಎಸೆತಕ್ಕೆ 6 ಸಿಕ್ಸ‌ರ್..

 

ಯುವರಾಜ್ ಸಿಂಗ್ 2007ರ ಟಿ20 ವಿಶ್ವಕಪ್‌ನಲ್ಲಿ ಸಿಡಿಸಿದಂತೆ ಒಂದೇ ಓವರ್‌ನ ಎಲ್ಲಾ 6 ಎಸೆತಗಳನ್ನೂ ಗ್ಯಾಲರಿಗೆ ಅಟ್ಟುವುದು ವೈಭವ್ ಸೂರ್ಯವಂಶಿಯ ವೃತ್ತಿಜೀವನದ ಅತಿ ದೊಡ್ಡ ಹಾಗೂ ಮೊದಲ ಆದ್ಯತೆಯ ಕನಸಾಗಿದೆ.

 

ಅತಿ ವೇಗದ ಶತಕ

 

ಕ್ರೀಸ್‌ಗೆ ಬಂದ ತಕ್ಷಣ ಎದುರಾಳಿಗಳ ಮೇಲೆ ಸವಾರಿ ಮಾಡುವ ಈ ಯುವ ಬ್ಯಾಟರ್, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ದಾಖಲೆ ಬರೆಯುವುದನ್ನು ತಮ್ಮ ಎರಡನೇ ದೊಡ್ಡ ಗುರಿಯಾಗಿಸಿಕೊಂಡಿದ್ದಾರೆ.

 

ಲಾಂಗೇಸ್ಟ್ ಸಿಕ್ಸ‌ರ್

 

ಚೆಂಡನ್ನು ಬೌಂಡರಿ ಲೈನ್ ದಾಟಿಸುವುದಷ್ಟೇ ಅಲ್ಲ, ಮೈದಾನದಿಂದಲೇ ಆಚೆ ತಲುಪಿಸಿ ಸಾರ್ವಕಾಲಿಕ ‘ಲಾಂಗೇಸ್ಟ್ ಸಿಕ್ಸ‌ರ್’ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳುವುದು ಇವರ ಮೂರನೇ ದೊಡ್ಡ ಆಸೆಯಾಗಿದೆ.

 

ಅತಿ ಹೆಚ್ಚು ಶತಕ

 

ಟೀಮ್ ಇಂಡಿಯಾ ಪರ ಗರಿಷ್ಠ ಶತಕಗಳನ್ನು ಬಾರಿಸಿ ದೇಶಕ್ಕೆ ವಿಶ್ವಮಟ್ಟದಲ್ಲಿ ಅಪಾರ ಕೀರ್ತಿ ತರುವುದನ್ನು ವೈಭವ್ 4ನೇ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ.

 

 

ಲಾಸ್ಟ್ ಬಾಲ್ ಸಿಕ್ಸರ್, ಫೀಲ್ಡಿಂಗ್

 

ತೀವ್ರ ಒತ್ತಡದ ನಡುವೆ ಪಂದ್ಯದ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಡುವುದಕ್ಕೆ 5ನೇ ಸ್ಥಾನ ನೀಡಿದ್ದರೆ, ಬೌಂಡರಿ ಲೈನ್‌ನಲ್ಲಿ ಅದ್ಭುತ ಕ್ಯಾಚ್ ಹಿಡಿದು ಅಭಿಮಾನಿಗಳನ್ನು ರಂಜಿಸುವುದಕ್ಕೆ 6ನೇ ಸ್ಥಾನ ನೀಡಿದ್ದಾರೆ.

 

ವೈಭವ್ ಅವರ ಈ ಬೈಂಡ್ ಬ್ಯಾಂಕಿಂಗ್ ಕೇವಲ ಮೋಜಿನ ಆಟವಲ್ಲ. ಇದು ಜಾಗತಿಕ ಕ್ರಿಕೆಟ್‌ನಲ್ಲಿ ಭಾರತದ ಧ್ವಜವನ್ನು ಎತ್ತಿಹಿಡಿಯಲು ಹಂಬಲಿಸುತ್ತಿರುವ ಯುವ ಭಾರತದ ಬಲವಾದ ಸಂಕಲ್ಪ, ಮನಸ್ಸಿನಲ್ಲಿ ಮೂಡಿದ ಈ ಕನಸುಗಳು ಶೀಘ್ರದಲ್ಲೇ ಮೈದಾನದಲ್ಲಿ ಸಾಕ್ಷಾತ್ಕಾರಗೊಂಡು, ಯುವರಾಜ್ ಸಿಂಗ್ ಹಾಗೂ ವಿರಾಟ್ ಕೊಹ್ಲಿ ಅವರಂತೆ ವೈಭವ್ ಸೂರ್ಯವಂಶಿ ಕೂಡ ರನ್ ಮಳೆ ಹರಿಸಲಿ.

Team Udayaprabha
";