ಅಹಮದಾಬಾದ್:
ಅಹಮದಾಬಾದ್ನಲ್ಲಿ ನಡೆದ 2026ರ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದ ಭಾರತದ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ₹131 ಕೋಟಿ ನಗದು ಬಹುಮಾನವನ್ನು ಘೋಷಿಸಿದೆ.
2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಗೆದ್ದಾಗ ನೀಡಿದ್ದ ₹125 ಕೋಟಿ ಬಹುಮಾನಕ್ಕಿಂತ ಹೆಚ್ಚಿನ ಮೊತ್ತವನ್ನು ಬಿಸಿಸಿಐ ಈ ಬಾರಿ ನೀಡಿದೆ.
ಸೂರ್ಯಕುಮಾರ ಯಾದವ್ ನೇತೃತ್ವದ ಭಾರತ ತಂಡವು ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟಾರೆ ಮೂರು ಬಾರಿ ಈ ಪ್ರಶಸ್ತಿ ಗೆದ್ದ ಏಕೈಕ ತಂಡವಾಗಿದೆ.
“ಭಾರತ ತಂಡದ ಈ ಐತಿಹಾಸಿಕ ಸಾಧನೆಯನ್ನು ಬಿಸಿಸಿಐ ಅಭಿನಂದಿಸುತ್ತದೆ. ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಆಯ್ಕೆಗಾರರ ಪರಿಶ್ರಮಕ್ಕೆ ಈ ಗೌರವ ಸಲ್ಲುತ್ತಿದೆ,” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
2026ರ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್ಗಳ ಬೃಹತ್ ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದ ಭಾರತದ ತಂಡಕ್ಕೆ ಐಸಿಸಿಯಿಂದ ಸುಮಾರು 21.5 ಕೋಟಿ ರೂ. (2.34 ಮಿಲಿಯನ್ USD) ಬಹುಮಾನ ಲಭಿಸಿದೆ.
ಪ್ರಶಸ್ತಿ ಮೊತ್ತದ ಜೊತೆಗೆ, ಗುಂಪು ಹಂತ ಮತ್ತು ಸೂಪರ್ 8 ಹಂತಗಳಲ್ಲಿ ಗೆದ್ದ ಪ್ರತಿ ಪಂದ್ಯಕ್ಕೂ ತಂಡಕ್ಕೆ ತಲಾ ಸುಮಾರು ₹28.6 ಲಕ್ಷ ಬೋನಸ್ ಸಿಕ್ಕಿದೆ. ರನ್ನರ್-ಅಪ್ ನ್ಯೂಜಿಲೆಂಡ್ ತಂಡಕ್ಕೆ ಅಂದಾಜು 10.75 ಕೋಟಿ ರೂ. ದೊರೆತಿದೆ.


,


















