| Latest Version 9.0.7 |

Education News

ಹೆಬ್ರಿ ಅಮೃತ ಭಾರತಿಯಲ್ಲಿ ಯೋಗ ದಿನಾಚರಣೆ : ಜೀವನಕ್ಕೆ ಸ್ನಾನ, ಧ್ಯಾನ, ವ್ಯಾಯಾಮ ಅಗತ್ಯ-ಮೋಹನ್ ಕುಮಾರ್

ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಯೋಗ ದಿನಾಚರಣೆ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ವಿವೇಕ ಯೋಗ ಕೇಂದ್ರ ಬ್ರಹ್ಮಾವರದ ಯೋಗ ಗುರು ಮೋಹನ್ ಕುಮಾರ್ ಮತ್ತು ಯೋಗ ತರಬೇತುದಾರರಾದ ಶ್ರೀಮತಿ ಭಾರತಿ ಯೋಗಾಭ್ಯಾಸಗಳನ್ನು ಕಲಿಸಿದರು.

ಯೋಗ ಗುರು ಮೋಹನ್ ಕುಮಾರ್ ಅಷ್ಟಾಂಗ ವೇದದ ಪ್ರಾಮುಖ್ಯತೆಯನ್ನು ತಿಳಿಸಿದರು.

ಸ್ನಾನ, ಧ್ಯಾನ, ವ್ಯಾಯಾಮ ದೇಹದ ಲವಲವಿಕೆಯನ್ನು ಸದಾ ಕಾಪಾಡಿಕೊಳ್ಳುತ್ತವೆ ಎಂದರು. ಪ್ರಾಂಶುಪಾಲ ಪ್ರಕಾಶ್ ಜೋಗಿ ಸಂಪನ್ಮೂಲ ವ್ಯಕ್ತಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು.

ವಿದ್ಯಾರ್ಥಿಗಳಾದ ಪ್ರತೀಕ್ಷ ನಿರೂಪಿಸಿ, ಸಹನಿ ಸ್ವಾಗತಿಸಿ, ಚಿರಾಗ್ ಆರ್ ಪೂಜಾರಿ ವಂದಿಸಿದರು.

Team Udayaprabha
";