| Latest Version 9.0.7 |

State News

ತಿಗಣೆ ಕಾಟದಿಂದ ಮುಕ್ತಿ ಕೊಡಿಸು ದೇವಿ : ದೇವರ ಕಾಣಿಕೆ ಡಬ್ಬದಲ್ಲಿ ಸಿಕ್ತು ಪತ್ರ

ಸವದತ್ತಿ : ಮನೆಯಲ್ಲಿರುವ ತಿಗಣೆಗಳ ಕಾಟದಿಂದ ಮುಕ್ತಿ ಸಿಕ್ಕರೆ ಹಣ್ಣು, ಕಾಯಿ ಮಾಡಿಸುತ್ತೇನೆ ಎಂದು ಭಕ್ತರೊಬ್ಬರು ಶ್ರೀ ಕ್ಷೇತ್ರ ಸವದತ್ತಿ ಯಲ್ಲಮ್ಮನಿಗೆ ವಿಶೇಷ ಕಾಣಿಕೆ ಪತ್ರ ಸಲ್ಲಿಸಿರುವ ಘಟನೆ ಕುತೂಹಲ ಮೂಡಿಸಿದೆ. ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ ಕಾರ್ಯದ ವೇಳೆ ಈ ಪತ್ರ ಪತ್ತೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ.

ಸಾಮಾನ್ಯವಾಗಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿ, ಕುಟುಂಬದ ನೆಮ್ಮದಿ, ಆರೋಗ್ಯ, ಉದ್ಯೋಗ ಹಾಗೂ ಆರ್ಥಿಕ ಸಂಕಷ್ಟಗಳ ನಿವಾರಣೆಗಾಗಿ ದೇವಿಯ ಹುಂಡಿಗೆ ಕಾಣಿಕೆ ಸಲ್ಲಿಸುತ್ತಾರೆ. ಆದರೆ, ಮನೆಯಲ್ಲಿನ ತಿಗಣೆಗಳ ಕಾಟದಿಂದ ಮುಕ್ತಿ ದೊರೆಯಲಿ ಎಂದು ದೇವಿಯ ಮೊರೆ ಹೋಗಿರುವ ಭಕ್ತನ ಮನವಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ನಾಲ್ಕು ದಿನದಿಂದ ನಡೆಯುತ್ತಿದ್ದ ಏಣಿಕೆಯಲ್ಲಿ 2.69 ಕೋಟಿ ರೂ. ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ. ಇದರಲ್ಲಿ 2.34 ಕೋಟಿ ನಗದು, 26.95 ಲಕ್ಷ ರೂ. ಮೌಲ್ಯದ ಮೌಲ್ಯದ ಚಿನ್ನಾಭರಣ, 7.32 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣ ಸೇರಿವೆ.

ಮೇ 7ರಿಂದ ಅಕ್ಟೋಬರ್ 10ರ ಅವಧಿಯಲ್ಲಿ ಭಕ್ತರು ಹುಂಡಿಯಲ್ಲಿ ಹಾಕಿದ್ದ ಕಾಣಿಕೆ ಎಣಿಸಲಾಗಿದೆ. ಕಾಣಿಕೆ ಇರಿಸಿದ್ದ 139 ಚೀಲಗಳ ಪೈಕಿ 54 ಚೀಲಗಳಲ್ಲಿನ ಕಾಣಿಕೆ ಎಣಿಕೆ ಮಾಡಲಾಗಿದೆ. ಇನ್ನೂ 85 ಚೀಲಗಳ ಎಣಿಕೆ ಬಾಕಿ ಇದೆ’ ಎಂದು ಯಲ್ಲಮ್ಮ ದೇವಸ್ಥಾನ ಅಧಿಕಾರಿಗಳು ತಿಳಿಸಿದ್ದಾರೆ.

Team Udayaprabha
";