ಬೆಂಗಳೂರು: ಸಾರ್ವಜನಿಕರಿಗೆ ಕೆಎಂಎಫ್ (KMF) ಮತ್ತೊಂದು ಶಾಕ್ ನೀಡಿದ್ದು, ಹಾಲು, ಮೊಸರು ಬೆಲೆ ಹೆಚ್ಚಳದ ಬೆನ್ನಲ್ಲೇ ನಂದಿನಿ ತುಪ್ಪ (Nandini Ghee), ಬೆಣ್ಣೆ ಹಾಗೂ ಪನೀರ್ ಬೆಲೆಗಳನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದೆ. ನವೆಂಬರ್ 4 ರಿಂದಲೇ ಜಾರಿಗೆ ಬರುವಂತೆ ಈ ಹೊಸ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.
ಪ್ರಮುಖವಾಗಿ ನಂದಿನಿ ತುಪ್ಪದ ಬೆಲೆ ಲೀಟರ್ಗೆ 100 ರೂ. ಹೆಚ್ಚಳವಾಗಿದೆ. ಬೆಣ್ಣೆ ಹಾಗೂ ಪನ್ನೀರ್ ದರಗಳಲ್ಲೂ ಏರಿಕೆ ಕಂಡುಬಂದಿದೆ. ನಂದಿನಿ ತುಪ್ಪದ ಲೀಟರ್ಗೆ ಹಳೆಯ ದರ ₹715 ರೂ. ಇದ್ದರೆ, ಇದೀಗ 850 ರೂ. ಕ್ಕೆ ಏರಿಕೆಯಾಗಿದೆ. ನಂದಿನಿ ಬೆಣ್ಣೆಯ ಪ್ರತಿ ಕೆಜಿ ದರ 700ರಿಂದ 780 ರೂ.ಗಳಿಗೆ ಏರಿಕೆಯಾಗಿದ್ದು, 80 ರೂ. ಹೆಚ್ಚಳವಾಗಿದೆ. ಪನ್ನೀರ್ ಪ್ರತಿ ಕೆಜಿ ದರ 408ರಿಂದ 485 ರೂ.ಕ್ಕೆ ಏರಿಕೆಯಾಗಿದ್ದು, 77 ರೂ. ಹೆಚ್ಚಳವಾಗಿದೆ.
ನಂದಿನಿ ತುಪ್ಪ ದರ ಪಟ್ಟಿ
1 ಲೀಟರ್ ಸ್ಯಾಚೆಟ್ : ಹಳೆಯ ಬೆಲೆ 715 ರೂ. ಇದ್ದದ್ದು ಈಗ 850 ರೂ. ಕ್ಕೆ ಏರಿಕೆಯಾಗಿದೆ.
1 ಲೀಟರ್ ಪೆಟ್ ಜಾರ್ : ಹಳೆಯ ಬೆಲೆ 735 ರೂ. ಇದ್ದದ್ದು ಈಗ 870 ರೂ. ಕ್ಕೆ ಏರಿಕೆಯಾಗಿದೆ.
15 ಕೆಜಿ ಟಿನ್ : ಹಳೆಯ ಬೆಲೆ 11,625 ರೂ. ಇದ್ದದ್ದು ಈಗ ಬರೋಬ್ಬರಿ 14,100 ರೂ. ಕ್ಕೆ ತಲುಪಿದೆ.
ನಂದಿನಿ ಬೆಣ್ಣೆ ದರ ಪಟ್ಟಿ
500 ಗ್ರಾಂ ಉಪ್ಪು ಸಹಿತ ಬೆಣ್ಣೆ : ಹಳೆಯ ಬೆಲೆ 310 ರೂ. ಇದ್ದದ್ದು ಈಗ 380 ರೂ. ಆಗಿದೆ.
500 ಗ್ರಾಂ ಉಪ್ಪಿಲ್ಲದ ಬೆಣ್ಣೆ : ಹಳೆಯ ಬೆಲೆ 285–330 ರೂ. ಇದ್ದದ್ದು ಈಗ 390 ರೂ. ಕ್ಕೆ ಏರಿಕೆಯಾಗಿದೆ.
200 ಗ್ರಾಂ ಉಪ್ಪಿಲ್ಲದ ಬೆಣ್ಣೆ: ಹಳೆಯ ಬೆಲೆ 135 ಇದ್ದದ್ದು ಈಗ 160 ರೂ. ಆಗಿದೆ
ನಂದಿನಿ ಪನೀರ್ ದರ ಪಟ್ಟಿ
200 ಗ್ರಾಂ ಪನೀರ್ ಪ್ಯಾಕ್: ಹಳೆಯ ಬೆಲೆ 96 ರೂ. ಇದ್ದದ್ದು ಈಗ 115 ರೂ. ಕ್ಕೆ ಏರಿಕೆಯಾಗಿದೆ.
1 ಕೆಜಿ ಪನೀರ್ ಪ್ಯಾಕ್: ಹಳೆಯ ಬೆಲೆ 408 ರೂ. ಇದ್ದದ್ದು ಈಗ 485 ರೂ. ಕ್ಕೆ ತಲುಪಿದೆ.
ಈ ಸರಣಿ ಬೆಲೆ ಏರಿಕೆಯಿಂದಾಗಿ ಹೋಟೆಲ್ಗಳಲ್ಲಿ ಹಾಗೂ ಬೇಕರಿಗಳಲ್ಲಿ ಪನೀರ್ ಖಾದ್ಯಗಳು, ಸಿಹಿ ತಿನಿಸುಗಳ ಬೆಲೆಯಲ್ಲಿ ಮತ್ತಷ್ಟು ಹೆಚ್ಚಾಗುವ ಭೀತಿ ಎದುರಾಗಿದ್ದು, ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರ ಬಜೆಟ್ ಸಂಪೂರ್ಣ ಏರುಪೇರಾಗಿದೆ.
Udaya Prabha > State News > ಈಗ ನಂದಿನಿ ತುಪ್ಪ, ಬೆಣ್ಣೆ, ಪನೀರ್ ಬೆಲೆಯಲ್ಲೂ ಭಾರೀ ಹೆಚ್ಚಳ
ಈಗ ನಂದಿನಿ ತುಪ್ಪ, ಬೆಣ್ಣೆ, ಪನೀರ್ ಬೆಲೆಯಲ್ಲೂ ಭಾರೀ ಹೆಚ್ಚಳ
Team Udayaprabha05/11/2026
posted on

the authorTeam Udayaprabha
All posts byTeam Udayaprabha
Leave a reply

,


















