ಕೊಲಂಬೊ: ಐತಿಹಾಸಿಕ 600ನೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರು ಸಿದ್ಧತೆ ಆರಂಭಿಸಿದ್ದಾರೆ. 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಶ್ರೀಲಂಕಾಗೆ ತೆರಳಿರುವ ಶುಭ್ಮನ್ ಗಿಲ್ ನಾಯಕತ್ವದ ಭಾರತ ತಂಡ, ಬುಧವಾರ ತರಬೇತಿ ಶುರು ಮಾಡಿಕೊಂಡಿದೆ.
ತಂಡದ ಎಲ್ಲಾ ಆಟಗಾರರು ನೆಟ್ ಪ್ರಾಕ್ಟಿಸ್ ನಲ್ಲಿ ತೊಡಗಿಸಿಕೊಂಡರು. ಕೆ.ಎಲ್.ರಾಹುಲ್, ರಿಷಭ್ ಪಂತ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ ಸೇರಿದಂತೆ ಎಲ್ಲಾ ಬೌಲರ್‌ಗಳೂ ನೆಟ್ಸ್‌ನಲ್ಲಿ ಬೆವರಿಳಿಸಿದರು. ಶುಭೌಮನ್ ಗಿಲ್, ಕೋಚ್ ಗೌತಮ್ ಗಂಭೀರ್ ಅವರು ಆಟಗಾರರ ಜೊತೆ ಮಾತುಕತೆಯಲ್ಲಿ ನಿರತವಾಗಿರುವ ಫೋಟೋಗಳನ್ನು ಬಿಸಿಸಿಐ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದೆ.
ಆಗಸ್ಟ್ 15ರಿಂದ ಗಾಲೆ ಕ್ರೀಡಾಂ
ಗಣದಲ್ಲಿ ನಡೆಯಲಿರುವ ಮೊದಲ ಪಂದ್ಯ, ಭಾರತದ ಪಾಲಿನ 600ನೇ ಟೆಸ್ಟ್ ಆಗಿರಲಿದೆ. 1932ರ ಜೂನ್‌ನಲ್ಲಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ದ ಭಾರತ ತನ್ನ ಚೊಚ್ಚಲ ಟೆಸ್ಟ್ ಪಂದ್ಯವಾಡಿತ್ತು. ಈವರೆಗಿನ 599 ಟೆಸ್ಟ್‌ಗಳಲ್ಲಿ ತಂಡ 186ರಲ್ಲಿ ಗೆದ್ದಿದ್ದು, 188ರಲ್ಲಿ ಸೋಲು ಅನುಭವಿಸಿದೆ. 224 ಪಂದ್ಯಗಳು ಡ್ರಾಗೊಂಡಿದ್ದು, 1 ಪಂದ್ಯ ಟೈ ಆಗಿದೆ.
ಭಾರತ ತಂಡ 600ನೇ ಟೆಸ್ಟ್ ಆಡಿದ 3ನೇ ತಂಡ ಎಂಬ ಖ್ಯಾತಿಗೂ ಪಾತ್ರವಾಗಲಿದೆ. ಕ್ರಿಕೆಟ್ ಜನಕ ಎಂದು ಕರೆಸಿಕೊಳ್ಳುವ ಇಂಗ್ಲೆಂಡ್ 1097 ಟೆಸ್ಟ್ ಪಂದ್ಯಗಳನ್ನಾಡಿದ್ದರೆ, ಆಸ್ಟ್ರೇಲಿಯಾ ತಂಡ 882 ಟೆಸ್ಟ್ ಗಳನ್ನಾಡಿವೆ. ಉಳಿದಂತೆ ವೆಸ್ಟ್ ಇಂಡೀಸ್ 596, ನ್ಯೂ ಜಿಲೆಂಡ್ 487, ದಕ್ಷಿಣ ಆಫ್ರಿಕಾ 479, ಪಾಕಿಸ್ತಾನ 471 ಪಂದ್ಯಗಳಲ್ಲಿ ಕಣಕ್ಕಿಳಿದಿವೆ.


,


















