| Latest Version 9.0.7 |

Sports News

ಕ್ರಿಕೆಟ್ : ನ್ಯೂಜಿಲೆಂಡ್ ಎದುರು ಭಾರತ ಜಯಭೇರಿ

ಆಕ್ಲೆಂಡ್: ಟಿ-20 ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ನೀಡಿದ್ದ 199 ರನ್‌ಗಳ ಗುರಿಯನ್ನು ಭಾರತ ತಂಡ ಕೇವಲ 13.2 ಓವರ್‌ಗಳಲ್ಲಿ ತಲುಪಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಮತ್ತೊಮ್ಮ ಕಿವೀಸ್ ಪಡೆಗೆ ತವರಿನಲ್ಲೇ ಭಾರತೀಯ ಬ್ಯಾಟರ್‌ಗಳು ಆಘಾತ ನೀಡಿದರು.

ಟಾಸ್ ಸೋತು ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್, ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ತಂಡದ ಪರ ಆರಂಭಿಕ ಬ್ಯಾಟರ್‌ಗಳು ಉತ್ತಮ ಅಡಿಪಾಯ ಹಾಕಿಕೊಟ್ಟರೆ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಬಿರುಸಿನ ಆಟವಾಡಿ ಭಾರತಕ್ಕೆ ದೊಡ್ಡ ಗುರಿ ನೀಡಿದರು.

ಡೇರಿಲ್ ಮಿಚಲ್ 89, ಫಿನ್ ಅಲೆನ್ 40, ಜೆಕಬ್ 39 ರನ್ ಹೊಡೆದು ಗಮನ ಸೆಳೆದರು.

ಸ್ಪೋಟಕ ಚೇಸಿಂಗ್: 199 ರನ್‌ಗಳ ಜಯದ ಗುರಿ ಬೆನ್ನತ್ತಿದ ಭಾರತ ತಂಡ ಆರಂಭದಿಂದಲೇ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡಿತು. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದ ಭಾರತೀಯ ಬ್ಯಾಟರ್‌ಗಳು, ಪ್ರತಿ ಓವರ್‌ಗೆ 15ಕ್ಕೂ ಹೆಚ್ಚು ರನ್ ಕಲೆಹಾಕಿದರು.

ಅಭಿಷೇಕ್ ಶರ್ಮಾ 38 ಬಾಲ್‌ಗಳಿಗೆ 113 ಹಾಗೂ ಸೂರ್ಯವಂಶಿ 19 ಬಾಲ್‌ಗಳಿಗೆ 40 ರನ್ ಸಿಡಿಸುವ ಮೂಲಕ ಭಾರತವನ್ನು ಗೆಲುವಿನ ದಡ ಸೇರಿಸಿದರು.

ಕೇವಲ 13.2 ಓವರ್‌ಗಳಲ್ಲಿ (80 ಎಸೆತಗಳಲ್ಲಿ) 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿದ ಭಾರತ, ಇನ್ನೂ 40 ಎಸೆತಗಳು ಬಾಕಿ ಇರುವಂತೆಯೇ ವಿಜಯದ ನಗೆ ಬೀರಿತು. ಈ ಮೂಲಕ ಭಾರತ ಸರಣಿ ವಶಪಡಿಸಿಕೊಂಡಿತು

Team Udayaprabha
";