| Latest Version 9.0.7 |

Local News

ಹೆಬ್ರಿ ಎಸ್.ಆರ್. : ಕರಾಟೆ ಪರೀಕ್ಷೆ 

 

 

ಹೆಬ್ರಿ : ಹೆಬ್ರಿಯ ಎಸ್‌.ಆರ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಕರಾಟೆ ತರಗತಿಯ ಬೆಲ್ಟ್ ಪರೀಕ್ಷೆಯ ನಡೆಯಿತು. ವಿಜೇತ ವಿದ್ಯಾರ್ಥಿಗಳು ಬಿಳಿಹಳದಿ ಬೆಲ್ಟ್ ಪಡೆದರು.

 

ಕಾರ್ಯಕ್ರಮದ ಅಭ್ಯಾಗತರಾಗಿದ್ದ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್ ನಾಗರಾಜ್ ಶೆಟ್ಟಿ ಮಾತನಾಡಿ, ಕರಾಟೆ ನಮ್ಮಲ್ಲಿ ಶಿಸ್ತು, ಸಂಯಮ, ದೈಹಿಕ ಮತ್ತು ಮಾನಸಿಕ ಸದೃಢತೆಯನ್ನುಂಟು ಮಾಡುತ್ತದೆ. ನಿಮ್ಮ ಆತ್ಮಸ್ಥೈರ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು

 

 

ಬೆಂಗಳೂರಿನ ಖುಷಿ ಬಯೋಟೆಕ್ ಪ್ರೈವೆಟ್ ಲಿಮಿಟೆಡ್ನ ನಿರ್ದೇಶಕ ಉಮೇಶ್ ಶೆಟ್ಟಿ ಮಾತನಾಡಿ, ಈಗಿನ ಕಾಲದ ವಿದ್ಯಾರ್ಥಿಗಳಿಗೆ ಅವಕಾಶಗಳು ಯಥೇಚ್ಚವಾಗಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಿ. ಕರಾಟೆಯು ವಿದ್ಯಾರ್ಥಿಗಳಲ್ಲಿರುವ ಏಕಾಗ್ರತೆ, ಚುರುಕುತನವನ್ನು ಇನ್ನಷ್ಟು ಬಲಪಡಿಸುತ್ತದೆ. ಇರುವಂತಹ ಎಲ್ಲಾ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಕರಾಟೆಯಲ್ಲಿ ಉನ್ನತ ಸ್ಥಾನಕ್ಕೇರಿ ಎಂದು ಶುಭ ಹಾರೈಸಿದರು.

 

ಎಸ್.ಆರ್ ಪಬ್ಲಿಕ್ ಸ್ಕೂಲಿನ ಉಪ ಪ್ರಾಂಶುಪಾಲ ದೀಪಕ್ ಎನ್, ಕರ್ನಾಟಕ ಬುಡೊಕನ್ ಕರಾಟೆ ಫೆಡರೇಷನ್‌ ಅಧ್ಯಕ್ಷ ಕ್ಯೊಶಿ ವಾಮನ್ ಪಾಲನ್, ರಾಜ್ಯ ಮಹಿಳಾ ಕರಾಟೆ ಫೆಡರೇಷನ್‌ ಕಾರ್ಯದರ್ಶಿ ಶಿಹಾನ್ ಮೇಘ ಹಾಗೂ ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಾಮನ್ ಪಾಲನ್ ನಿರ್ವಹಿಸಿದರು.

Team Udayaprabha
";