| Latest Version 9.0.7 |

Local News

ಉತ್ತಮ ಮಳೆ, ಸಮೃದ್ಧ ಬೆಳೆಗಾಗಿ ಪ್ರಾರ್ಥಿಸಿದ ಅಡವಿಸಿದ್ದರಾಮ ಸ್ವಾಮೀಜಿ

ಘಟಪ್ರಭಾ: ರೈತರಿಗೆ ಉತ್ತಮ ಮಳೆಯಾಗಿ, ಸಮೃದ್ಧ ಬೆಳೆ ದೊರೆತು ಅವರ ಬದುಕು ಹಸನಾಗಲಿ ಎಂದು ಪೂಜ್ಯ ಅಡವಿಸಿದ್ದರಾಮ ಸ್ವಾಮೀಜಿ ಆಶಿಸಿದರು.

ಸಮೀಪದ ಶಿಂಧಿಕುರಬೇಟ ಗ್ರಾಮದಲ್ಲಿ ಭಾನುವಾರ ನಡೆದ ವಿಠ್ಠಲ ದೇವರ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ದೇಶದ ಬೆನ್ನೆಲುಬಾಗಿದ್ದು, ಅವರ ಬದುಕು ಸುಧಾರಿಸಿದಾಗ ದೇಶದ ಆರ್ಥಿಕತೆ ಮತ್ತು ಸಮೃದ್ಧಿ ಹೆಚ್ಚುತ್ತದೆ. ನಾಡಿನಾದ್ಯಂತ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಿ, ಹೊಲ-ಗದ್ದೆಗಳು ಹಸಿರಿನಿಂದ ಕಂಗೊಳಿಸಿ, ರೈತರಿಗೆ ಸಮೃದ್ಧ ಫಸಲು ದೊರೆಯಲಿ ಎಂದು ಪ್ರಾರ್ಥಿಸಿದರು.

ದೇವರು, ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಮಹತ್ವ ನೀಡಬೇಕು. ಹಿರಿಯರು ರೂಪಿಸಿದ ಧಾರ್ಮಿಕ ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿ ಗೌರವಿಸಿದರು. ಬಳಿಕ ಅವರು ಅನ್ನಸಂತರ್ಪಣೆಗೆ ಚಾಲನೆ ನೀಡಿದರು. ವಿಠ್ಠಲ ದೇವರ ಜಾತ್ರಾ ಟ್ರಸ್ಟ್ ಕಮಿಟಿ ಸದಸ್ಯರು ಸ್ವಾಮೀಜಿಯವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಅಂಕಲಗಿ ಡಾ. ಅಮರಸಿದ್ದೇಶ್ವರ ಸ್ವಾಮಿಗಳು, ವಿಠ್ಠಲ ದೇವರ ದೇವಋಷಿ ಮುರೇಪ್ಪ ಪೂಜೇರಿ, ಶಹಾನವಾಜ ಮಕಾಂದಾರ, ಮುತ್ತೇಪ್ಪ ಕಟ್ಟಿಕಾರ, ರಾಮಪ್ಪ ಆಲೋಸಿ, ಅಡಿವೆಪ್ಪ ಬೆಕ್ಕನ್ನವರ, ಬರಮಪ್ಪ ಅಕ್ಕಿವಾಟ, ವಿಠ್ಠಲ ಸತ್ತಿಗೇರಿ, ಬಸವಣ್ಣಿ ಅಕ್ಕಿವಾಟ ಸೇರಿದಂತೆ ಅನೇಕ ಭಕ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Team Udayaprabha
";