| Latest Version 9.0.7 |

Sports News

ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಭಾರತ ಸಜ್ಜು

 

ಕೋಲ್ಕತ್ತ: ಹಾಲಿ ಚಾಂಪಿಯನ್ ಭಾರತ ತಂಡವು ಟಿ20 ವಿಶ್ವಕಪ್ ಟೂರ್ನಿ ಸೆಮಿಫೈನಲ್ ತಲುಪಲು ಇನ್ನೊಂದು ಕಠಿಣ ಸವಾಲನ್ನು ಮೀರಿ ನಿಲ್ಲುವ ಒತ್ತಡದಲ್ಲಿದೆ. ಭಾನುವಾರ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ತಂಡದ ಎದುರು ಜಯಿಸಲೇಬೇಕಾಗಿದೆ.

ಸೂಪರ್ 8ರ ಒಂದನೇ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ ತಂಡವು ಈಗಾಗಲೇ 4 ಅಂಕಗಳೊಂದಿಗೆ ನಾಲ್ಕರ ಘಟ್ಟ ಪ್ರವೇಶಿಸಿದೆ. ಜಿಂಬಾಬೈ ಎರಡು ಪಂದ್ಯ ಸೋತು ಹೊರಬಿದ್ದಿದೆ. ಈ ಗುಂಪಿನಲ್ಲಿ ಈಗ ಉಳಿದಿರುವ ಏಕೈಕ ಪಂದ್ಯದಲ್ಲಿ ಭಾರತ ಮತ್ತು ವಿಂಡೀಸ್ ಹಣಾಹಣಿ ನಡೆಸಲಿವೆ. ಉಭಯ ತಂಡಗಳೂ ತಲಾ ಎರಡು ಅಂಕ ಗಳಿಸಿವೆ. ಆದರೆ ವಿಂಡೀಸ್ ನೆಟ್ ರನ್ ರೇಟ್ ಭಾರತಕ್ಕಿಂತ ಹೆಚ್ಚು ಇದೆ. ಎರಡನೇ ಸ್ಥಾನದಲ್ಲಿದೆ.

ಈ ಪಂದ್ಯದಲ್ಲಿ ಜಯಿಸುವ ತಂಡವು ಮಾರ್ಚ್ 5ರಂದು ಮುಂಬೈನಲ್ಲಿ ನಡೆಯುವ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡುವುದು.

ಈ ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಭಾರತ ತಂಡವು ಸೋತಿತ್ತು. ಎರಡನೇಯ ಹಣಾಹಣಿಯಲ್ಲಿ ಜಿಂಬಾಬೈ ಎದುರು ಸೂರ್ಯಕುಮಾ‌ರ್ ಯಾದವ್ ನಾಯಕತ್ವದ ಬಳಗದ ಬ್ಯಾಟಿಂಗ್ ಪಡೆಯು ಮಿಂಚಿತ್ತು. ಇಲ್ಲಿಯವರೆಗೆ ವೈಫಲ್ಯ ಅನುಭವಿಸಿದ್ದವರು ಲಯಕ್ಕೆ ಮರಳಿದರು.

Team Udayaprabha
";