| Latest Version 9.0.7 |

Sports News

ವೈಭವ್ ಸೂರ್ಯವಂಶಿಗೆ ನಾಯಕನ ಪಟ್ಟ

ಪಟ್ನಾ: ಹದಿನೈದು ವರ್ಷದ ವೈಭವ್ ಸೂರ್ಯವಂಶಿ ಅವರು ಸೈಯದ್ ಮುಸ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಬಿಹಾರ ತಂಡದ ನಾಯಕತ್ವ ವಹಿಸಲಿದ್ದಾರೆ.

ಶುಕ್ರವಾರ ಬಿಹಾರ ಕ್ರಿಕೆಟ್ ಸಂಸ್ಥೆಯು ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಆಡುವ 17 ಆಟಗಾರರ ತಂಡವನ್ನು ಪ್ರಕಟಿಸಿದೆ. ವೈಭವ್ ನಾಯಕರಾಗಿದ್ದು, ಸೂರಜ್ ಕಶ್ಯಮ್ ಉಪನಾಯಕರಾಗಿದ್ದಾರೆ.

ಇದೇ 14ರಿಂದ ಟೂರ್ನಿ ಆರಂಭವಾಗುವುದು. ಬಿ ಗುಂಪಿನಲ್ಲಿ ಬಿಹಾರ ಆಡಲಿದೆ. ದೆಹಲಿ, ಹರಿಯಾಣ, ಜಮ್ಮು-ಕಾಶ್ಮೀರ, ಪಂಜಾಬ್, ರೈಲ್ವೆಸ್, ಸೌರಾಷ್ಟ್ರ ಮತ್ತು ತಮಿಳುನಾಡು ತಂಡಗಳೂ ಈ ಗುಂಪಿನಲ್ಲಿವೆ. ಬಿಹಾರ ತಂಡವು ಮೊದಲ ಪಂದ್ಯದಲ್ಲಿ ಸೌರಾಷ್ಟ್ರವನ್ನು ಎದುರಿಸಲಿದೆ.

ವೈಭವ್‌ ಅವರು ಈಗಾಗಲೇ ವಿವಿಧ ಹಂತಗಳಲ್ಲಿ ತಮ್ಮ ಸಾಮರ್ಥ್ಯ, ಪ್ರತಿಭೆ ತೋರಿಸಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ನಿರ್ಣಯಗಳಲ್ಲಿ ಸ್ಪಷ್ಟತೆ ಇದೆ. ಉತ್ತಮವಾಗಿ ಆಡಿದ್ದಾರೆ. ಆತ್ಮವಿಶ್ವಾಸಭರಿತರಾಗಿದ್ದಾರೆ. ಆದ್ದರಿಂದ ಅವರಿಗೆ ನಾಯಕತ್ವ ನೀಡಲಾಗಿದೆ’ ಎಂದು ಬಿಸಿಎ ಅಧ್ಯಕ್ಷ ಹರ್ಷವರ್ಧನ್ ಹೇಳಿದ್ದಾರೆ.ಅವರು ಈಚೆಗೆ ನ್ಯೂಜಿಲೆಂಡ್ ಎದುರಿನ ಟಿ20 ಪಂದ್ಯಗಳಲ್ಲಿ ಆಡಿದ್ದರು.

Team Udayaprabha
";